Click here to get directions and assistance from one of our representatives. For more information:

   
     Call 24 Hours: 9900571986

ಕುವೆಂಪು ರಾಷ್ಟ್ರೀಯ ಪುರಸ್ಕಾರ   arrow

ಕುವೆಂಪು ರಾಷ್ಟ್ರೀಯ ಪುರಸ್ಕಾರ


ಮಾಜಿ ಸಚಿವರೂ ಮತ್ತು ಸಜ್ಜನ ರಾಜಕಾರಣಿಯೂ ಆದ ದಿವಂಗತ ಎಂ. ಚಂದ್ರಶೇಖರ್ ಅವರು ಕುವೆಂಪು ಅವರ ಸಾಹಿತ್ಯ, ಜೀವನಾದರ್ಶ ಮತ್ತು ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಕಾಯಕದಲ್ಲಿ ಬದುಕಿನುದ್ದಕ್ಕೂ ಶ್ರಮಿಸಿದವರು. ಅವರ ಸುಪುತ್ರರಾದ ಶ್ರೀ ಎಂ.ಸಿ. ನರೇಂದ್ರ ಅವರು ತಮ್ಮ ತಂದೆಯ ಹೆಸರಿನಲ್ಲಿ ಅರವತ್ತು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿ, ಅದರಲ್ಲಿ ಬರುವ ಉತ್ಪನ್ನ ಹಣದಲ್ಲಿ ಕುವೆಂಪು ಅವರ ಹೆಸರಿನಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಸ್ಥಾಪಿಸಲು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ “ಕುವೆಂಪು ರಾಷ್ಟ್ರೀಯ ಪುರಸ್ಕಾರ” ಸ್ಥಾಪನೆಯಾಗಿದೆ. ಭಾರತದ ಅಧಿಕೃತ ಭಾಷೆಗಳಲ್ಲಿ ಅತ್ಯಂತ ಗಮನಾರ್ಹ ಸಾಧನೆ ಮಾಡಿದ ಮಹನೀಯರಿಗೆ ಪುರಸ್ಕಾರ ಸಲ್ಲುತ್ತದೆ. ಈ ಪುರಸ್ಕಾರದ ಮುಖ್ಯ ಅಂಶಗಳು ಇಂತಿವೆ:

 • ಪ್ರಶಸ್ತಿಯನ್ನು ರಾಷ್ಟ್ರೀಯ ಪುರಸ್ಕಾರವನ್ನಾಗಿ ಪ್ರದಾನ ಮಾಡುವುದು.
 • 2013ರಿಂದ ಪ್ರಶಸ್ತಿ ಪ್ರದಾನ ಆರಂಭ.
 • ಇದು ವಾರ್ಷಿಕ ಪ್ರಶಸ್ತಿಯಾಗಿದ್ದು, ಭಾರತೀಯ ಭಾಷೆಯಲ್ಲಿ ಸೃಜನಶೀಲತೆಯ ಅತ್ಯುನ್ನತ ಮಟ್ಟವನ್ನು ಮುಟ್ಟಿದ ಸಾಧಕರೊಬ್ಬರನ್ನು, ಪ್ರತಿಷ್ಠಾನವು ರೂಪಿಸಿರುವ ಆಯ್ಕೆ ಮಾನದಂಡಗಳನ್ನು ಅನುಸರಿಸಿ ಆಯ್ಕೆ ಮಾಡಲಾಗುವುದು.
 • ರಾಷ್ಟ್ರೀಯ ಪುರಸ್ಕಾರದ ಗೌರವ ಧನ ರೂ. 5.00 ಲಕ್ಷ (ಐದು ಲಕ್ಷ ರೂಪಾಯಿಗಳು ಮಾತ್ರ) ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
 • ಕವಿಯ ಜನ್ಮದಿನದಂದು (29ನೆಯ ಡಿಸೆಂಬರ್) ಕುಪ್ಪಳಿಯಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು.
 • ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಆಯೋಜನೆಯ ಜವಾಬ್ದಾರಿಯನ್ನುಪ್ರತಿಷ್ಠಾನ ವಹಿಸುವುದು.

ಪ್ರತಿಷ್ಠಾನವು ಶ್ರೀ ಎಂ.ಸಿ. ನರೇಂದ್ರ ಅವರ ಔದಾರ್ಯವನ್ನು ಕೃತಜ್ಞತೆಯಿಂದ ನೆನೆಯುತ್ತದೆ.

ಇದುವರೆಗಿನ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪುರಸ್ಕೃತರು


 1. 2017 – ಶ್ರೀ ನೀಲಮಣಿ ಫೂಕಾನ್ ಮತ್ತು ಶ್ರೀ ಹೊಮೆನ್ ಬೊರ್ಗೊಹೈನ್ (ಅಸ್ಸಾಮಿ)
 2. 2016 – ದೇವನೂರ ಮಹಾದೇವ (ಕನ್ನಡ)
 3. 2015 – ಪ್ರೊ. ಶ್ಯಾಮ್‌ ಮನೋಹರ್‌ (ಮರಾಠಿ)
 4. 2014 – ಪ್ರೊ. ನಾಮವರ್‌ ಸಿಂಗ್‌ (ಹಿಂದಿ)
 5. 2013 – ಪ್ರೊ.ಕೆ. ಸಚ್ಚಿದಾನಂದನ್(ಮಲಯಾಳಂ)