Click here to get directions and assistance from one of our representatives. For more information:

   
     Call 24 Hours: 9900571986

ಕುವೆಂಪು   arrow

ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು – ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.(ಜ್ಞಾನಪೀಠ ಪ್ರಶಸ್ತಿ ಉಲ್ಲೇಖ)


Kannada Literature has a long and rich tradition of more than 1500 years. Great Poets such as Pampa, Ranna, Harihara, Kumaravyasa, Lakshmisha, Ratnakaravarni and other equally eminent poets have enriched Kannada literature through their works. In the twelfth century; saint-poets such as Basavanna, Allama Prabhu, Mahadeviyakka, Ambigara Chowdayya and others have composed hundreds of Vachanas in the day-to-day language of common people with the express intention of uplifting the downtrodden sections of society. And in the order to successfully further such a rich body of Kannada literary tradition, a great poetic spirit was born in the early years of the twentieth century. It was none other than Kuvempu, who later, went on to adorn laurels such as the Rashtrakavi, a great poet-laureate and won love and admiration in the hearts of fifty million Kannadigas. (Prabhushankara)


ಋಷಿಪ್ರಜ್ಞೆ – ಕವಿಪ್ರತಿಭೆಗಳ ಅದ್ವೈತ ವ್ಯಕ್ತಿತ್ವದ “ಕುವೆಂಪು’ ಕಾವ್ಯನಾಮ, ಕನ್ನಡಿಗರಿಗೆ ಒಂದು ರೋಮಾಂಚನ. ನಿರಂಕುಶ ನಿಲುವು, ಅನನ್ಯ ಅಂತರ್ಮುಖತೆಗಳಿಂದ ಎರಕಗೊಂಡ ಇವರು ಕನ್ನಡಿಗರ ಮನಸ್ಸನ್ನು ಉದ್ದಕ್ಕೂ ಆಳಿದುದು, ಇಂದು ಇತಿಹಾಸ.

“ನಾಡಿನ ಪುಣ್ಯದ ಪೂರ್ವದಿಗಂತದಿ ನವ ಅರುಣೋದಯ” ಮೂಡುತ್ತಲಿರುವಾಗ ಮೂಡಿಬಂದವರು, ಕುವೆಂಪು. ಹೊಸ ಮೌಲ್ಯಗಳನ್ನು ಸ್ಥಾಪಿಸುವುದು, ಹೊಸ ಭಾಷೆಯನ್ನು – ಹೊಸ ಕಾವ್ಯಭಾಷೆಯನ್ನು ಸೃಷ್ಟಿಸುವುದು ಈ ಸಂಕ್ರಮಣ ಸಂದರ್ಭದ ಕವಿಗಳ ಜವಾಬ್ದಾರಿಯಾಗಿದ್ದಿತು. ಇಂಥ ಹೊಚ್ಚ ಹೊಸ ಸಾಹಿತ್ಯಿಕ ಪರಿಸರವನ್ನು ಬೆಳೆಸುತ್ತಲೇ ಸಾಹಿತಿಯಾಗಿ ಬೆಳೆದ ಗಣ್ಯರಲ್ಲಿ ಗಣ್ಯರೆನ್ನಿಸಿದ್ದಾರೆ, ಕುವೆಂಪು. (ಎಂ.ಎಂ. ಕಲಬುರ್ಗಿ)


ಕುವೆಂಪು ಸಮಗ್ರ ಕನ್ನಡ ಸಾಹಿತ್ಯದಲ್ಲಿ ಶಿಖರಸೂರ್ಯ. ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಅವರ ಕೊಡುಗೆ ಗಣ್ಯವಾದದ್ದು. ಭಾವಗೀತೆಗಳಿಂದ ಹಿಡಿದು ಶಿಶುಸಾಹಿತ್ಯದಿಂದ ತೊಡಗಿ, ಕಾವ್ಯ, ನಾಟಕ, ವಿಮರ್ಶೆ, ಕಾದಂಬರಿ, ಮಹಾಕಾವ್ಯದವರೆಗೆ ಅದರ ವ್ಯಾಪ್ತಿಯಿದೆ. (ಹಂಪನಾ)


Kuvempu is undoubtedly one of the major writers in the atlas of world literature. The nature, scope and depth of his literature is so vast, varied and immense that it can stand on equal footing with the writings of any great writer of any age in any part of the world. This would be evident to every serious reader of literature who has direct exposure to what Kuvempu wrote. Though many admirers of Kuvempu consider him as a great poet, there are some perspective readers who are of the opinion that his ingenuity lies in his fiction. No doubt he was a major poet who played a prominent role in silhouetting the contours of modern Kannada poetry; but his novels are a great contribution to the world literature. His novels are so originally and organically rooted in the flora and fauna of Malenadu that they, by their sheer virtue of having been firmly rooted in the local, transcend to become the global. Like the novels of Tolstoy, Kuvempu’s novels too are epic-natured in their vision, proportion and dimension. (Komalesha)


ಯುಗದ ಕವಿಗೆ

ಯುಗದ ಕವಿಗೆ

ಜಗದ ಕವಿಗೆ

ಶ್ರೀ ರಾಮಾಯಣ ದರ್ಶನದಿಂದಲೇ ಕೈ

ಮುಗಿದ ಕವಿಗೆ – ಮಣಿಯದವರು ಯಾರು?

ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ

ಕವನ ತತಿಗೆ ತಣಿಯದವರು ಆರು?

ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ

ಕವಿಯ ಜತೆಗೆ ಕುಣಿಯದವರು ಆರು?

ಕನ್ನಡಿಸಲಿ ಶಿವ ಜೀವನ

ಮುನ್ನಡೆಸಲಿ ಯುವ-ಜನ-ಮನ

ಇದೆ ಪ್ರಾರ್ಥನೆ ನಮಗೆ

ತಮವೆಲ್ಲಿದೆ ರವಿಯಿದಿರಿಗೆ?

ಉತ್ತಮ ಕವಿ ನುಡಿ – ಚದುರಗೆ

ಚಾರುತ್ವದ ಕುಂದಣದಲಿ

ಚಾರಿತ್ರ್ಯದ ರತ್ನ

ಚಾತುರ್ಯದ ಮಂತಣದಲಿ

ಸತ್ಸಂಗದ ಯತ್ನ

ಇದೆ ತೃಪ್ತಿಯು ನಿಮಗೆ (ದ.ರಾ.ಬೇಂದ್ರೆ)


ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ ‘ರಾಮಾಯಣ ದರ್ಶನಂ’ ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ ‘ರಸೋ ವೈ ಸಃ’ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು. (ಕೆ. ಸಚ್ಚಿದಾನಂದನ್, ಮಲಯಾಳಂ ಕವಿ)