Click here to get directions and assistance from one of our representatives. For more information:

   
     Call 24 Hours: 9900571986

ಬದುಕು   arrow

ಜನನ

ದಿನಾಂಕ: 29.12.1904

ಜನ್ಮಸ್ಥಳ: ಹಿರಿಕೊಡಿಗೆ (ತಾಯಿಯ ತವರು – ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ)

ತಂದೆ: ಕುಪ್ಪಳಿ ವೆಂಕಟಪ್ಪಗೌಡ (ಕುಪ್ಪಳಿ ಓಬಯ್ಯಗೌಡರ ಮೊಮ್ಮಗ; ಕುಪ್ಪಳಿ ಮಂಜಪ್ಪಗೌಡರ ಮಗ)

ತಾಯಿ: ಸೀತಮ್ಮ (ಹಿರಿಕೊಡಿಗೆಯಲ್ಲಿ ನೆಲೆ ನಿಂತಿದ್ದ ಅಮ್ಮಡಿ ತಿಮ್ಮಯ್ಯನಾಯಕ ಮತ್ತು ಶೇಷಮ್ಮನವರ ಮಗಳು)

ಸ್ವಗ್ರಾಮ: ಕುಪ್ಪಳಿ (ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ)

ಸಹೋದರಿಯರು: ದಾನಮ್ಮ ಮತ್ತು ಪುಟ್ಟಮ್ಮ


ಶಿಕ್ಷಣ

  • ತಾಯಿಯ ಮನೆ ಹಿರಿಕೊಡಿಗೆ, ತಂದೆಯ ಮನೆ ಕುಪ್ಪಳಿಯಲ್ಲಿ ಬಾಲ್ಯದ ದಿನಗಳನ್ನು ಕಳೆಯುತ್ತಿದ್ದ ಬಾಲಕ ಪುಟ್ಟಪ್ಪನಿಗೆ, ಕುಪ್ಪಳಿ ಮನೆಯಲ್ಲಿದ್ದ ಉಪ್ಪರಿಗೆ ಶಾಲೆಯಲ್ಲಿ ಅಕ್ಷರಾಬ್ಯಾಸ ಆರಂಭ. ಆರಂಭಿಕ ವಿದ್ಯಾಭ್ಯಾಸ ನೀಡಿ ಬಾಲಕನ ಶಿಕ್ಷಣಕ್ಕೆ ಮುನ್ನುಡಿ ಬರೆದಿದ್ದೇ ಆ ಉಪ್ಪರಿಗೆ ಶಾಲೆ. ಆದರೆ ಬಾಲಕನಿಗೆ ಮಲೆನಾಡಿನ ಪರಿಸರ ತೆರೆದ ಶಾಲೆಯಾಗಿತ್ತು.
  • ಮಾದ್ಯಮಿಕ ವಿದ್ಯಾಭ್ಯಾಸ ತೀರ್ಥಹಳ್ಳಿ ಎ.ವಿ. ಸ್ಕೂಲಿನಲ್ಲಿ ನಡೆದು, 1919ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಮತ್ತು 1920ರಲ್ಲಿ ಇಂಗ್ಲಿಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ.
  • ಮೈಸೂರಿನ ವೆಸ್ಲಿಯನ್ ಮಿಶನ್ ಹೈಸ್ಕೂಲಿನಲ್ಲಿ ಪ್ರೌಢ ಶಾಲಾ ಶಿಕ್ಷಣ.
  • ಮಹಾರಾಜಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ. 1927ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ
  • 1929ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ

ವೃತ್ತಿ

  • 1929 ರಲ್ಲಿ ವೃತ್ತಿ ಜೀವನ ಆರಂಭ
  • ಮೈಸೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ (ಈಗಿನ ಯುವರಾಜ ಕಾಲೇಜು) ಕನ್ನಡ ಉಪನ್ಯಾಸಕರಾಗಿ ಸೇರ್ಪಡೆ.
  • ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ 1939ರವರೆಗೆ ಉಪನ್ಯಾಸಕ ಹುದ್ದೆ
  • ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 1946ರವರೆಗೆ ಕನ್ನಡ ರೀಡರ್ ಹುದ್ದೆ
  • 1946ರಿಂದ ನಿವೃತ್ತಿಯಾಗುವವರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕ, ಕನ್ನಡ ವಿಭಾಗದ ಮುಖ್ಯಸ್ಥ, ಮಹಾರಾಜಾ ಕಾಲೇಜಿನ ಪ್ರಾಂಶುಪಾಲ ಹಾಗೂ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ (1956-60) ಸೇವೆ ಸಲ್ಲಿಸಿ 1960ರಲ್ಲಿ ನಿವೃತ್ತಿ
  • ಮೈಸೂರು ವಿ.ವಿ.ಯ ಸ್ನಾತಕೋತ್ತರ ತರಗತಿಗಳನ್ನು ಮಹಾರಾಜಾ ಕಾಲೇಜಿನಿಂದ ಪೇರ್ಪಡಿಸಿ ಮಾನಸ ಗಂಗೋತ್ರಿಯಲ್ಲಿ ನೆಲೆನಿಲ್ಲಿಸಿದ್ದು. (ಮಾನಸಗಂಗೋತ್ರಿಯ ಸ್ಥಾಪನೆ: 1960) ಪದವಿ ತರಗತಿಗಳಲ್ಲಿ ಕನ್ನಡವನ್ನು ಮಾದ್ಯಮವಾಗಿಸಿದ್ದು ಅವರ ವೃತ್ತಿಜೀವನದ ಮಹತ್ವದ ಸಾಧನೆಗಳು.

ಕುಟುಂಬ

ಪತ್ನಿ: ಶ್ರೀಮತಿ ಹೇಮಾವತಿ (ದೇವಂಗಿ ರಾಮಣ್ಣಗೌಡರ ಮಗಳು)

ಮಕ್ಕಳು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ


ಮರಣ

11.11.1994