Click here to get directions and assistance from one of our representatives. For more information:

   
     Call 24 Hours: 9900571986

ಹೆಜ್ಜೆ ಗುರುತುಗಳು   arrow

 • ಕುವೆಂಪು ಅವರನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಂಡಿರುವುದು.
 • ಕವಿ ಹುಟ್ಟಿ ಬೆಳೆದ ಕುಪ್ಪಳಿ ಮನೆಯನ್ನು ಸ್ವಾಧಿನಕ್ಕೆ ಪಡೆದು ಸ್ಮಾರಕವಾಗಿ ನಿರ್ಮಾಣ ಮಾಡಲಾಗಿದೆ. ಕವಿಮನೆಯು ಕವಿಯನ್ನು ಪರಿಚಯಿಸುವ ವಸ್ತು ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಕವಿ ಬಳಸಿದ ವಸ್ತುಗಳು, ಕವಿಯ ಎಲ್ಲಾ ಕಾಲದ ಪೋಟೋಗಳು, ಪ್ರಶಸ್ತಿ ಪತ್ರಗಳು ಹಾಗೂ ಸ್ಮರಣಿಕೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
 • ಕವಿಗೆ ಸ್ಫೂರ್ತಿ ನೀಡಿದ ಹಾಗೂ ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳವಾದ ಕವಿಶೈಲದಲ್ಲಿ ಬೃಹತ್ ಶಿಲಾ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.
 • 2004ರಲ್ಲಿ ಕವಿಯ ಜನ್ಮ ಶತಮಾನೋತ್ಸವದ ನೆನಪಿಗೆ ಸ್ಮಾರಕ ಭವನವನ್ನು (ಹೇಮಾಂಗಣ), ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಎಲ್ಲ ಅನುಕೂಲವಿರುವಂತೆ ನಿರ್ಮಾಣ ಮಾಡಲಾಗಿದೆ. ಕಟ್ಟಡದಲ್ಲಿ ಸುಮಾರು 75 ಜನಕ್ಕೆ ವಸತಿ ವ್ಯವಸ್ಥೆ, ಕಾರ್ಯಕ್ರಮ ನಡೆಸಲು ಸುಸಜ್ಜಿತ ವೇದಿಕೆ, 500 ಜನ ಕುಳಿತುಕೊಳ್ಳಬಹುದಾದ ಸಭಾಂಗಣ, ದೃಕ್-ಶ್ರವಣ ಕೊಠಡಿ, 100 ಜನ ಕುಳಿತುಕೊಳ್ಳಬಹುದಾದ ಸಭಾ ಕೊಠಡಿ, ಗ್ರಂಥಾಲಯ, ಅಡಿಗೆ ಮನೆ ಮತ್ತು ಭೋಜನಾಲಯ ನಿರ್ಮಾಣ ಮಾಡಲಾಗಿದೆ.
 • ಕುವೆಂಪು ನಿರಂತರ ಯೋಜನೆಯ ಅಡಿಯಲ್ಲಿ ಸಾಹಿತ್ಯಕ ಕಾರ್ಯಕ್ರಮಗಳನ್ನು ಪ್ರತಿಷ್ಠಾನವು ನಡೆಸುತ್ತಿದೆ.
 • ದೇಶದಾದ್ಯಂತ, ಹಲವಾರು ರಾಜ್ಯಗಳ ನಗರಗಳಲ್ಲಿ ಕುವೆಂಪು ಸಾಹಿತ್ಯಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಕನ್ನಡೇತರ ಭಾಷಿಕರಿಗೂ ಕುವೆಂಪು ಸಾಹಿತ್ಯವನ್ನು ತಲುಪಿಸಲಾಗುತ್ತಿದೆ.
 • ಕವಿ ಪರಿಚಯದ ಪುಸ್ತಿಕೆಯನ್ನು ಇಂಗ್ಲಿಷ್ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಿದೆ.
 • ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾಗಿ ರೂಪಗೊಂಡಿರುವ ಕುವೆಂಪು ಸ್ಮಾರಕ ಜೈವಿಕ ಅರಣ್ಯ ಸುಮಾರು 3500 ಎಕರೆ ಅರಣ್ಯವನ್ನು ಒಳಗೊಂಡಿದೆ. ಅದಕ್ಕೆ ಪೂರಕ ಸ್ಪಂದನೆಯನ್ನು ಪ್ರತಿಷ್ಠಾನ ನೀಡುತ್ತಾ ಬಂದಿದೆ.
 • ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಕುಪ್ಪಳಿಯಲ್ಲಿ ತೆರೆದಿರುವ ಕುವೆಂಪು ಕನ್ನಡ ಅದ್ಯಯನ ಕೇಂದ್ರಕ್ಕೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ಈ ಕೇಂದ್ರದಿಂದ ಕನ್ನಡ ಸಂಶೋಧನೆಗೆ, ಪಿಹೆಚ್.ಡಿ. ಅಧ್ಯಯನಕ್ಕೆ ಅವಕಾಶವಿರುತ್ತದೆ.
 • ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಗಮಕವಾಚನವನ್ನು (ಸಂಗ್ರಹ) ನಾಲ್ಕು ಡಿ.ವಿ.ಡಿ.ಗಳಲ್ಲಿ ಹೊರತರಲಾಗಿದೆ.
 • ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಹನ್ನೊಂದು ಸಂಪುಟಗಳಲ್ಲಿ (ಕುವೆಂಪು ಸಮಗ್ರ ಸಾಹಿತ್ಯ ಮಾಲೆ) ಪ್ರಕಟಿಸಲಾಗಿದೆ.
 • ಮಹತ್ವದ ‘ಕುವೆಂಪು ಚಿತ್ರ ಸಂಪುಟ‘ವನ್ನು ಸರ್ಕಾರದ ನೆರವಿನಿಂದ ಪ್ರಕಟಿಸಲಾಗಿದೆ.
 • ಕುವೆಂಪು ಸಾಹಿತ್ಯದ ಆಯ್ದ ನುಡಿಮುತ್ತುಗಳನ್ನು ಸೇರಿಸಿ ‘ಕುವೆಂಪು ನುಡಿತೋರಣ‘ ಎಂಬ ಕಿಸೆಪುಸ್ತಕವನ್ನು ಪ್ರಕಟಿಸಲಾಗಿದೆ.
 • ಕುವೆಂಪು ಆಯ್ದ ಸಣ್ಣ ಕತೆಗಳನ್ನು ದೃಶ್ಯ ಮಾದ್ಯಮಕ್ಕೆ ಅಳವಡಿಸುವ ನಿಟ್ಟಿನಲ್ಲಿ ‘ಶ್ರೀಮನ್ಮೂಕವಾಗಿತ್ತು’ ಡಿ.ವಿ.ಡಿ. ಬಿಡುಗಡೆ.
 • ಕವಿಯ ಎಲ್ಲ ಕೃತಿಗಳ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.
 • ಸಂಚಾರಿ ವಾಹನದ ಮೂಲಕ ಕವಿಯ ಪುಸ್ತಕಗಳನ್ನು ರಾಜ್ಯದಾದ್ಯಂತ ಮಾರಾಟ ಮಾಡಲಾಗುತ್ತಿದೆ.
 • ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದ ದಿವಂಗತ ಎಂ. ಚಂದ್ರಶೇಖರ್ ಅವರ ಕುಟುಂಬ ವರ್ಗದ ಸಹಕಾರದಿಂದ, ಕುವೆಂಪು ಅವರ ಹೆಸರಿನಲ್ಲಿ, ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ ಭಾರತದ ಯಾವುದಾದರು ಭಾಷೆಯ ಒಬ್ಬ ಸಾಹಿತಿಗೆ ಕುವೆಂಪು ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಈಗಾಗಲೇ, ಮಲಯಾಳಂ ಭಾಷೆಯ ಶ್ರೀ ಸಚ್ಚಿದಾನಂದನ್, ಹಿಂದಿ ಭಾಷೆಯ ನಾಮವರ ಸಿಂಗ್, ಮರಾಠಿ ಭಾಷೆಯ ಪ್ರೊ. ಶ್ಯಾಮ್ ಮನೋಹರ್ ಮತ್ತು ಕನ್ನಡದ ಶ್ರೀ ದೇವನೂರ ಮಹಾದೇವ ಅವರಿಗೆ ಈ ಗೌರವ ಸಲ್ಲಿಸಲಾಗಿದೆ.
 • ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ತೆಗೆದಿರುವ ಮಲೆನಾಡಿನ ಹಕ್ಕಿ ಚಿತ್ರಗಳ ಕಲಾಗ್ಯಾಲರಿಯನ್ನು ಸಿದ್ಧಪಡಿಸಲಾಗಿದೆ.
 • ಶ್ರೀ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯ ಸ್ಮಾರಕದ ನಿರ್ವಹಣೆಯನ್ನು ಪ್ರತಿಷ್ಠಾನ ವಹಿಸಿಕೊಂಡಿದೆ.
 • ದಿನಾಂಕ 17.01.2017ರ ರಾಜ್ಯ ಸರ್ಕಾರದ ಆದೇಶದಂತೆ, ಕುವೆಂಪು ಭೂಸ್ಪರ್ಷ ಮಾಡಿದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಹಿರೇಕೊಡಿಗೆ ಗ್ರಾಮದ ಸ್ಮಾರಕವನ್ನು ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಪ್ರತಿಷ್ಠಾನವು ವಹಿಸಿಕೋಮಡಿರುತ್ತದೆ. ಈಗ ಹಿರೇಕೊಡಿಗೆಯ ಜನ್ಮಸ್ಥಳ ಸ್ಮಾರಕವನ್ನು “ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ಸ್ಮಾರಕ“ವನ್ನಾಗಿ ಅಭಿವೃದ್ಧಿ ಪಡಿಸಿ 03.02.2018ರಂದು ಲೋಕಾರ್ಪಣೆ ಮಾಡಲಾಗಿದೆ. ಅಲ್ಲಿ ಒಂದು ಕಲಾ ಗ್ಯಾಲರಿ ಮತ್ತು ಫೋಟೋ ಗ್ಯಾಲರಿಯನ್ನೂ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ, ಅಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು, ಸಮಗ್ರ ಮಾಹಿತಿಯನ್ನು ಒದಗಿಸುವ ವ್ಯವಸ್ಥೆ ಮಾಡಿದೆ.